ಮಾಧವಿ ಭಂಡಾರಿಯವರು ಜನಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದಲ್ಲಿ. ಇವರ ತಂದೆ ರಾಮಗಣಪ ಭಂಡಾರಿ ಮತ್ತು ತಾಯಿ ಮಂಕಾಳಿ. == ಶಿಕ್ಷಣ == ಪ್ರಾಥಮಿಕ ಶಿಕ್ಷಣವನ್ನು ಧಾರೇಶ್ವರದಲ್ಲಿ ಮುಗಿಸಿದರು. ನಂತರ ಇವರ ಗುರು ಗೌರಿ ಅಡಿಗರ ಮಾರ್ಗದರ್ಶನದಂತೆ, ಬೊಂಬಾಯಿಯಲ್ಲಿ ಶಿಕ್ಷಣವನ್ನು ಮುಂದುವರೆಸಿದರು. ಗಿಲ್ಡರ್ ಲೇನ್ ಮುನ್ಸಿಫಲ್ ಸ್ಕೂಲಿನಲ್ಲಿ ೮ ರಿಂದ ೧೧ನೇ ತರಗತಿವರೆಗೆ ಕಲಿತರು , ಮುಂದಿನ ಒಂದು ವರ್ಷ ಪರೇಲ್ ನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು. ಡಾ. ಎ. ವಿ. ಬಾಳಿಗಾ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಮುಗಿಸಿದರು. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಹಿಂದಿ ಸ್ನಾತಕೋತ್ತರ ಪದವಿಯನ್ನು ಪಡೆದರು. == ವೃತ್ತಿ ಜೀವನ == ಮಾಧವಿಯವರ ವೃತ್ತಿ ಬದುಕು ಆರಂಬಗೊಂಡದ್ದು, ಉಡುಪಿಯ ಪೂರ್ಣಪ್ರಜ್ಣಾ ಕಾಲೇಜಿನಲ್ಲಿ. ೧೯೭೯ರಿಂದ ೨೦೧೫ವರೆಗೆ ಕರ್ತವ್ಯವನ್ನು ನಿರ್ವಹಿಸಿ, ಪ್ರಾಂಶುಪಾಲರಾಗಿಯೂ ಸೇವೆಸಲ್ಲಿಸಿದ್ದಾರೆ. == ರಂಗಭೂಮಿ == ಇವರು ರಂಗಭೂಮಿ ಕಲಾವಿದರಾಗಿದ್ದಾರೆ. 'ಸ್ನಾನ' ನಾಟಕದಲ್ಲಿ ಸರಸ್ವತಿ ಪಾತ್ರ, 'ಸಂಧ್ಯಾ-ಛಾಯಾ' ನಾಟಕದಲ್ಲಿ ನಾನಿ ಪಾತ್ರ, 'ನಾಗಮಂಡಲ' ನಾಟಕದಲ್ಲಿ ಕುರುಡವ್ವನ ಪಾತ್ರಗಳನ್ನು ಮಾಡಿದ್ದಾರೆ. ಇದರೊಂದಿಗೆ ಗುಡ್ದದ ಭೂತ 2019-07-30 ವೇಬ್ಯಾಕ್ ಮೆಷಿನ್ ನಲ್ಲಿ., ಓ ನನ್ನ ಬೆಳಕೆ ಮತ್ತು ಅಬೋಲಿನಾ ಧಾರವಾಹಿಗಳಲ್ಲಿ ನಟಿಸಿದ್ದಾರೆ. == ಪ್ರಕಟಿತ ಕೃತಿಗಳು == === ಕವನ ಸಂಕಲನ === ಉತ್ಸವದಿಂದ ಉತ್ಸಾಕ್ಕೆ. ಕಟ್ಟುವುದು ಬಲು ಕಷ್ಟ. ಕನ್ನಡಿಯೊಳಗಿನ ಪ್ರತಿಬಿಂಬ. === ಕಥಾ ಸಂಕಲನ === ಗಾಯ. === ವೈಚಾರಿಕ ಬರಹ === ಮಹಿಳೆ ಮತ್ತು ಕೋಮುವಾದ. === ಸಂಶೋಧನಾ ಪ್ರಬಂಧ === ರಾಜೇಂದ್ರಯಾದವ ಕಥಾ ಸಾಹಿತ್ಯದ ವಿವಿಧ ಆಯಾಮಗಳು. === ಅನುವಾದ === ಅಂತ್ಯಜ ( ವೈದೇಹಿಯವರ 'ಅಸ್ಪೃಶ್ಯರು' ಕಾದಂಬರಿಯ ಹಿಂದಿ ಅನುವಾದ ). ಡಾ. ನಾರಾಯಣ ರಾಯರ 'ವಿಶಿಷ್ಟ ದಾಂಪತ್ಯ ವಿಚಿತ್ರ ಕಾಯಿಲೆಯ' ಅನುವಾದ. ಭಗವಂತನ ಕಂದಮ್ಮಗಳು 2019-07-30 ವೇಬ್ಯಾಕ್ ಮೆಷಿನ್ ನಲ್ಲಿ. ( ಹಿಂದಿ ದೇವಶಿಶು ಕಾದಂಬರಿಯ ಅನುವಾದ ). ಕಮಲಾದೇವಿ ಯಾದೊಂಕ ಸಿಲ್ಸಿಲಾ (ವೈದೇಹಿಯವರ ಕಮಲಾಬಾಯಿ ಏಕವ್ಯಕ್ತಿ ಪ್ರದರ್ಶನದ ಅನುವಾದ ). ರಾಮದಾಸರ 'ದಾಸ ಭಾರತ'ವನ್ನು ಹಿಂದಿಗೆ ಅನುವಾದಿಸಿದ್ದಾರೆ. ನನಗೆ ನಾನೆ ಶಿಲ್ಪಿ. == ಪ್ರಶಸ್ತಿಗಳು == ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ. ಇವರ 'ಗಾಯ' ಕೃತಿಗೆ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ಪ್ರಶಸ್ತಿ. ಉಡುಪಿ ತಾಲೂಕು ಸಮ್ಮೀಳನದ ಸರ್ವಾಧ್ಯಕ್ಷತೆಯ ಗೌರವವನ್ನು ೨೦೧೭ರಲ್ಲಿ ಪಡೆದಿದ್ದಾರೆ. 'ನನಗೆ ನಾನೇ ಶಿಲ್ಪಿ ' ಕೃತಿಗೆ 'ಗೋಪಿರಾಮ್ ಗೋಯೆಂಕಾ ಪ್ರಶಸ್ತಿ' ದೊರೆತಿದೆ. ಸಿಂಡಿಕೇಟ್ ಬ್ಯಾಂಕ್ ನಿಂದ ಭಾಷಾ ಪ್ರಚಾರಕ ಸನ್ಮಾನ. ಉತ್ತರ ಪ್ರದೇಶದ ಹಿಂದಿ ಸಂಸ್ಥಾನ ಕನ್ನಡ - ಹಿಂದಿ ಸೌಹಾರ್ದ ಸನ್ಮಾನವನ್ನು ಸ್ವೀಕರಿಸಿದ್ದಾರೆ. ಸಾಹಿತ್ಯ ಸಾಧನೆಗಾಗಿ ಲಯನ್ಸ್ ಕ್ಲಬ್, ದಕ್ಷಿಣ ವಲಯ ಇವರನ್ನು ಸನ್ಮಾನಿಸಿದೆ. ರಂಗ ಭೂಮಿಯ ಸ್ಪರ್ಧೆಗಳಲ್ಲಿ ಮೂರು ಬಾರಿ ಶ್ರೇಷ್ಟ ನಟಿ ಪ್ರಶಸ್ತಿ ಲಭಿಸಿದೆ. == ಉಲ್ಲೇಖ ==